ಆಂಫಿಪೋಲಿಸ್
ಈಜಿಯನ್ ಸಮುದ್ರದ ಉತ್ತರತೀರದಲ್ಲಿನ ಒಂದು ಪಟ್ಟಣ. ಕ್ರಿ.ಪೂ. 437ರಲ್ಲಿ ಗ್ರೀಕರು ಈ ನಗರವನ್ನೂ ಸ್ವಾಧೀನಪಡಿಸಿಕೊಂಡರು. ಆದರೆ ಕ್ರಿ.ಪೂ.358ರಲ್ಲಿ ಮ್ಯಾಸಿಡೋನಿಯಾದ ಪ್ರಸಿದ್ಧ ದೊರೆಯಾದ ಫಿಲಿಪ್ಸ್ ಅದನ್ನೂ ಹತ್ತಿರ ಇದ್ದ ಚಿನ್ನದ ಗಣಿಯನ್ನೂ ಗೆದ್ದುಕೊಂಡ. ಮುಂದೆ ರೋಮನ್ ಸಾಮ್ರಾಜ್ಯದ ಕಾಲದಲ್ಲಿ ಅವರ ಪೌರ್ವಾತ್ಯ ಪ್ರಾಂತವೊಂದರ ರಾಜಧಾನಿಯಾಯಿತು. ಇಲ್ಲಿ ಪ್ರಾಚೀನ ರೋಮಿನ ಅನೇಕ ಶಾಸನಗಳು, ನಾಣ್ಯಗಳು, ಕೋಟೆಕೊತ್ತಲಗಳ ಉಳಿಕೆಗಳು ಸಿಕ್ಕಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ